ಯಕ್ಷಗಾನ ಕಲಾರಂಗ, ಉಡುಪಿ

1975ರಲ್ಲಿ ಸದಭಿರುಚಿಯ ಯಕ್ಷಗಾನವನ್ನು ಸಂಯೋಜಿಸುವ ದೃಷ್ಠಿಯಿಂದ ಸ್ಥಾಪನೆಗೊಂಡ ಯಕ್ಷಗಾನ ಕಲಾರಂಗ ಇಂದು ಉಡುಪಿಯ ಪ್ರತಿಷ್ಠಿತ ಸಾಂಸ್ಕೃತಿಕ – ಸಾಮಾಜಿಕ ಸಂಘಟನೆಯಾಗಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಅದು ಯಕ್ಷಗಾನಾಸಕ್ತರಾದ ಅಮ್ಮುಂಜೆ ನಾಗೇಶ್ ನಾಯಕ್, ನಿಟ್ಟೂರು ಸುಂದರ ಶೆಟ್ಟಿ, ಎಂ. ಎಸ್. ಕೃಷ್ಣನ್, ಜಿ.ವಿ.ಶೆಣೈ, ಕೆ. ಆನಂದ ಗಾಣಿಗ, ಯು. ಉಪೇಂದ್ರ ಕೆ. ವಿಶ್ವಜ್ಞ ಶೆಟ್ಟಿ ಇವರೇ ಮೊದಲಾದ ಸಮಾನಾಸಕ್ತರು ಯಕ್ಷಗಾನ ಕಲಾರಂಗವನ್ನು ಸ್ಥಾಪಿಸಿ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರಿಂದ ಉದ್ಘಾಟನೆಗೊಂಡಿತು.

ಪಯಣ

46 ವರ್ಷಗಳ ಇತಿಹಾಸ ಹೊಂದಿರುವ ಯಕ್ಷಗಾನ ಕಲಾರಂಗವು ಸಾಮಾಜಿಕ ದೃಷ್ಟಿಕೋನದಿಂದ ಶೈಕ್ಷಣಿಕವಾಗಿ ಸೇವೆ ಸಲ್ಲಿಸುವ ಏಕೈಕ ಗುರಿಯೊಂದಿಗೆ ಉಡುಪಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಯಕ್ಷಗಾನ ಸಂಬಂಧಿತ ಚಟುವಟಿಕೆಗಳಿಗೆ ಪ್ರಸಿದ್ದಿ ಮತ್ತು ಕಾಳಜಿ ಹೊಂದಿರುವ ಸಂಸ್ಥೆಯಾಗಿದೆ. ಪ್ರಸ್ತುತ ಅಪೇಕ್ಷಣೀಯ ಈ ಸ್ಥಾನಮಾನದ ಹಿಂದೆ ನೂರಾರು ಜನರ ನಿಸ್ವಾರ್ಥ ಸೇವೆಯ ಪ್ರಯತ್ನವಿದೆ. ವಿಶೇಷವಾಗಿ 1970ರ ದಶಕದ ಅವಧಿಯಲ್ಲಿ ಸಮಾನ ಆಸಕ್ತ ಯಕ್ಷಗಾನ ಕಲಾಭಿಮಾನಿಯವರು ಉಡುಪಿಯ ಸಾಮಾಜಿಕ ವಲಯದಲ್ಲಿ ಪರಿಚಿತರಾಗಿದ್ದ ಉನ್ನತ ವ್ಯಕ್ತಿತ್ವದ ಡಾ.ಬಿ.ಬಿ.ಶೆಟ್ಟಿಯವರ ನೇತೃತ್ವದಲ್ಲಿ ಸ್ಥಳೀಯ ಕಲಾಸಕ್ತ ಪ್ರೇಕ್ಷಕರಿಗಾಗಿ ಉಡುಪಿಗೆ ಭೇಟಿ ನೀಡಿದ ವಿವಿಧ ತಂಡಗಳ ಆಯ್ದ ಕಲಾವಿದರ ಅದ್ಭುತ ಪ್ರದರ್ಶನದ ಆಯೋಜನೆ ಮತ್ತು ಸಂಘಟನೆಯ ಕನಸಿನ ಫಲವೇ ಯಕ್ಷಗಾನ ಕಲಾರಂಗ. 1975 ರಲ್ಲಿ ಕೋಟ ಶಿವರಾಮ ಕಾರಂತರು , ಶ್ರೀ ವಿಶ್ವಜ್ಞ ಶೆಟ್ಟಿ, ಪ್ರೊ. ಬಿ. ವಿ. ಆಚಾರ್ಯ, ಪ್ರೊ.ಜಿ.ಆರ್.ರೈ, ಶ್ರೀ ಅಮ್ಮುಂಜೆ ನಾಗೇಶ್ ನಾಯಕ್, ಶ್ರೀ. ಕೆ. ಆನಂದ ಗಾಣಿಗ, ಶ್ರೀ. ಐ. ನಾರಾಯಣ, ಶ್ರೀ. ಮೆಸ್. ವಿಶ್ವೇಶ್ವರಯ್ಯ ಮತ್ತಿತರರ ಸಮ್ಮುಖದಲ್ಲಿ ಯಕ್ಷಗಾನಕಲಾರಂಗವನ್ನು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.

 

ಯಕ್ಷಗಾನ ಕಲಾರಂಗದ ಚಟುವಟಿಕೆಗಳ ಕ್ಷೇತ್ರವು ಇಂದು ಮಹತ್ತರವಾಗಿ ಬೆಳೆದಿದೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ದೃಷ್ಟಿಯಿಂದ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಯಕ್ಷನಿಧಿ ಎಂಬ ವೇದಿಕೆಯ ಮೂಲಕ ಯಕ್ಷಗಾನ ಪ್ರದರ್ಶನದ ಜೊತೆಗೆ ಕಲಾವಿದರ ಕ್ಷೇಮ-ಕಲ್ಯಾಣದ ಸಾಮಾಜಿಕ ಕಾಳಜಿಯನ್ನು ಹೊಂದಿದೆ. ಜಿಲ್ಲೆಯ ಪ್ರತಿಭಾವಂತ ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್ ಯೋಜನೆಯಡಿ ವಿದ್ಯಾರ್ಥಿವೇತನವನ್ನು ನೀಡಿ ಪ್ರೋತ್ಸಾಹಿಸುವ ಸಂಸ್ಥೆಯ ಪರೋಪಕಾರಿ ಸಾಹಸವನ್ನು ಸಾರ್ವಜನಿಕರು ಮತ್ತು ದಾನಿಗಳು ಬೆಂಬಲಿಸುತ್ತಿದ್ದಾರೆ. ಮಾತ್ರವಲ್ಲದೆ, ಯಕ್ಷ ಶಿಕ್ಷಣ ಟ್ರಸ್ಟ್ ರಚಿಸಿ ಅದರ ಮುಖೇನ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುವ ಕಾಯಕವನ್ನೂ ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ.

ಆರಂಭದ ದಿನಗಳಲ್ಲಿ ಸಂಸ್ಥೆಯ ಸಂಸ್ಥಾಪಕರುಗಳು, ಸದಸ್ಯತ್ವ ಹೆಚ್ಚಿಸುವ ಸಲುವಾಗಿ ವಾರ್ಷಿಕ ರೂ. 12 ಸದಸ್ಯತ್ವ ಶುಲ್ಕ ನಿಗದಿಪಡಿಸಿ ಕಲಾಭಿಮಾನಿ ಸಾರ್ವಜನಿಕರನ್ನು ಸಂಪರ್ಕಿಸಿ ಸದಸ್ಯತ್ವ ಪಡೆಯಲು ಮನವೊಲಿಸುತ್ತಿದ್ದರು. ಕಾಲಕ್ರಮೇಣ ಸಂಸ್ಥೆಯ ಜನಮನ್ನಣೆಯ ಮತ್ತು ಸಾರ್ವತ್ರಿಕ ಮೆಚ್ಚುಗೆಯ ಕಾರ್ಯಚಟುವಟಿಕೆಗಳಿಂದಾಗಿ, ಯಕ್ಷಗಾನದಲ್ಲಿ ಶ್ರದ್ಧೆ ಮತ್ತು ಅಭಿಮಾನ ಉಳ್ಳವರು ಸ್ವಇಚ್ಚೆಯಿಂದ ಮುಂದೆ ಬಂದು ರೂ 1000 ( ಪ್ರಸಕ್ತ ರೂ.2000. ) ಶುಲ್ಕವನ್ನು ಪಾವತಿಸಿ ಯಕ್ಷಗಾನ ಕಲಾರಂಗದ ಅಜೀವ ಸದಸ್ಯರಾಗುತ್ತಿರುವುದು ಸಂತಸದ ವಿಚಾರವಾಗಿದೆ. ಇದರ ಪರಿಣಾಮವಾಗಿ ಕಲಾರಂಗದ ಕಾರ್ಯಕ್ರಮಗಳ ಯಶಸ್ಸಿಗೆ ಮೌನವಾಗಿ ಕೆಲಸ ಮಾಡುವ ಮತ್ತು ಪ್ರೋತ್ಸಾಹಿಸುವ ಸ್ವಯಂ ಸೇವಕರ ತಂಡವು ದೊಡ್ಡ ಪ್ರಮಾಣದಲ್ಲಿ ಬೆಳೆಯುವಂತಾಯಿತು. ಹಾಗೂ ಸಂಸ್ಥೆಯ ಅಭಿವೃದ್ಧಿ ಜೊತೆಗೆ ಯಕ್ಷಗಾನ ಕಮ್ಮಟಗಳನ್ನು, ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಬೇಸಿಗೆ ವಸತಿ ಶಿಬಿರಗಳ ಆಯೋಜನೆ ಮೊದಲಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲು ಅನುವು ಮಾಡಿಕೊಟ್ಟಿತು.

ಇಂದು ಬಹು ಎತ್ತರದ ಸಾಧನೆಯನ್ನು ಸಾಧಿಸಿ ಪ್ರತಿಷ್ಠಿತ ಸಂಸ್ಥೆಯಾಗಿ ಯಕ್ಷಗಾನ ಕಲಾರಂಗವು ನಿಯಮಾನುಸಾರ ನೋಂದಣೆಗೊಂಡು, (ಯುಡಿಪಿ – ಎಸ್ 68 – 1985-86) ಪಾರದರ್ಶಕ ವ್ಯವಹಾರ (ಪಾನ್ ಸಂಖ್ಯೆ. ಎಎಎಎವೈ0510ಎ) ಮತ್ತು ಸೇವೆಯಿಂದಾಗಿ ಸಮಾಜದ ವಿಶ್ವಾಸಕ್ಕೆ ಪಾತ್ರವಾಗಿ ಬೆಳೆದು ನಿಂತಿದೆ. ದಾನಿಗಳು ನೀಡುವ ದಾನಶುಲ್ಕಕ್ಕೆ ಆದಾಯ ತೆರಿಗೆಇಲಾಖೆಯ 80 ಜಿ. ಸೌಲಭ್ಯವಿದೆ. (ಎಫ್ ಸಿ ಆರ್ ಎ ನೋಂದಣೆ ಸಂಖ್ಯೆ. 094690028/ 2010 )

AFFILIATES

ಪ್ರಶಸ್ತಿಗಳು
ಬೆಂಬಲದ ಮಾತುಗಳು.
ಪ್ರಕಟಿಸಿದ ಪುಸ್ತಕಗಳು

ಗೌಪ್ಯತಾ ನೀತಿ | ನಿಯಮ ಮತ್ತು ಷರತ್ತುಗಳು

ಕೃತಿ ಸ್ವಾಮ್ಯ ಇ-2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿದೆ | ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ  

We're currently hard at work gathering information and crafting content to bring you the best experience. Stay tuned for exciting updates!